ಹೆಮ್ಮೆಯ ಯುಎಇ ಕನ್ನಡಿಗರು ದುಬೈ ಕುಟುಂಬದ ಕಿರು ಪರಿಚಯ

ಎಲ್ಲಾದರು ಇರು ಎಂತಾದರು ಇರು ಎಂದೆಂದಿಗು ನೀ ಕನ್ನಡವಾಗಿರು ಎನ್ನುವ ಕುವೆಂಪು ನುಡಿಯಂತೆ ಅನಿವಾಸಿ ಕನ್ನಡಿಗರನ್ನು ತಾಯ್ನಾಡಿನ ಮಾತೃಭಾಷೆ, ಕಲೆ, ಸಂಸ್ಕೃತಿಯೊಂದಿಗೆ ನಿಕಟ ಸಂಪರ್ಕ ಹೊಂದುವ ಉದ್ದೇಶದಿಂದ ಹೆಮ್ಮೆಯ ಯುಎಇ ಕನ್ನಡಿಗರು ದುಬೈ ವಾಟ್ಸಾಪ್ ಗುಂಪು ಪ್ರಾರಂಭವಾಯಿತು. ಶ್ರೀ. ರಫೀಕಲಿ ಕೊಡಗು ಅವರಿಂದ 4ನೆ ಏಪ್ರಿಲ್ 2015 ರಂದು ಪ್ರಾರಂಭವಾದ ಈ ಗುಂಪು ಕನ್ನಡ ಕಂಪನ್ನು ಹರಡುತ್ತಾ ಮುನ್ನುಗ್ಗುತ್ತಿದೆ .

ಕನ್ನಡ ನಾಡು ನುಡಿ ಕುರಿತ ವಿಚಾರಗಳು, ಸುದ್ದಿಗಳು ಮತ್ತು ವಿಷಯಗಳನ್ನು ಪರಸ್ಪರ ಹಂಚಿಕೊಳ್ಳುತ್ತಾ ಕನ್ನಡ ಕಾರ್ಯಕ್ರಮಗಳು ಎಲ್ಲೇ ನಡೆದರೂ ಅದನ್ನು ಗುಂಪಿನ ಸದಸ್ಯರಿಗೆ ಮುಟ್ಟಿಸುತ್ತ ಕನ್ನಡಿಗರನ್ನು ಒಂದುಗೂಡಿಸುವಲ್ಲಿ ಯಶಸ್ವಿಯಾಯಿತು. ಸದಸ್ಯರು ಸ್ನೇಹಿತರಾದರು, ಸ್ನೇಹಿತರು ಒಗ್ಗೂಡಿ ಕಾರ್ಯಕ್ರಮಗಳ ಆಯೋಜಕರಾದರು , ಆಯೋಜಕರು ಇತರೆ ಕನ್ನಡ ಕೂಟಕ್ಕೆ ಸಂಪರ್ಕ ಸೇತುವೆಯಾದರು, ಸ್ವಯಂ ಪ್ರೇರಿತರಾದರು , ಇತರರಿಗೆ ಕನ್ನಡ ಪ್ರೇರಣೆಯಾದರು.ಯುಎಇ ಯಲ್ಲಿ ಕನ್ನಡ ವೃತ್ತಿಪರರು ಲಾಭ ರಹಿತ (ನಾಟ್ ಫಾರ್ ಪ್ರಾಫಿಟ್ ) ನಡೆಸುತ್ತಿರುವ ಸಾಂಸ್ಕೃತಿಕ ಗುಂಪು ಇದು ಎಂದು ಹೇಳಲು ಬಹಳ ಹೆಮ್ಮೆಯಾಗುತ್ತದೆ .

ತಮ್ಮ ತಾಯ್ನಾಡಿಗೆ ಏನಾದರು ಕೊಡುಗೆ ಕೊಡಬೇಕೆಂಬ ಹಂಬಲ ಪ್ರತಿಯೊಬ್ಬ ಅನಿವಾಸಿ ಕನ್ನಡಿಗನಲ್ಲಿ ಮನೆಮಾಡಿರುತ್ತದೆ. ಕನ್ನಡ ಭಾಷೆಯ ಸವಿಯುಂಡ ಪ್ರತಿಯೊಬ್ಬರು ಅದರ ಉಳಿವಿಗೆ, ಬೆಳವಣಿಗೆಗೆ ತಮ್ಮ ಯೋಗದಾನ ಮಾಡಬೇಕೆಂಬ ಹಂಬಲ ಇರುತ್ತದೆ. ರಫೀಕ್ ಅವರು ಈ ನಿಟ್ಟಿನಲ್ಲಿ ಕರೆ ಕೊಟ್ಟಾಗ ಸ್ಪಂದಿಸಿದ ಕನ್ನಡಿಗರಿಂದ ಆಯೋಜಕ ತಂಡ ರಚನೆಯಾಯಿತು. ಸಮಾನ ಮನಸ್ಕರಾದ ಸುದೀಪ್ ದಾವಣಗೆರೆ , ಸೆಂಥಿಲ್ ಬೆಂಗಳೂರು ಮಧು ದಾವಣಗೆರೆ , ಮಮತಾ ದುಬೈ, ಮಮತಾ ಶಾರ್ಜಾ , ಪಲ್ಲವಿ ಬಸವರಾಜ್, ಶಶಿಧರ್, ವೆಂಕಟೇಶ್, ಡಾ.ಸವಿತಾ ಮೋಹನ್, ಅನಿತಾ ರಾಮ್, ಹಾದಿಯ ಮಂಡ್ಯ ಸತೀಶ್ ಮಸೂರ್, ವಿಷ್ಣುಮೂರ್ತಿ ಮೈಸೂರು , ಕೈಜೋಡಿಸಿ ನಿಂತರು. ಕನ್ನಡ ಕಾರ್ಯಕ್ರಮಗಳನ್ನು ನಡೆಸುವ ಪರಿಕಲ್ಪನೆಗೆ ಮೊದಲ ಹೆಜ್ಜೆ ಇಟ್ಟರು.

ಹಬ್ಬ ಮತ್ತು ಕ್ರೀಡೆ ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗ ವಿಶ್ವವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಕಾರ್ಯಕ್ರಮದ ಹಿನ್ನೆಲೆಯಲ್ಲೇ ದುಬೈ ದಸರಾ ಕ್ರೀಡೋತ್ಸವ ಏರ್ಪಡಿಸಲಾಯಿತು. ಸುಮಾರು 700 ಹೆಚ್ಚು ಕನ್ನಡಿಗರು ಭಾಗವಹಿಸಿ ಸುಮಾರು 400ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಸಿ ಸ್ಪರ್ಧಾ ಮನೋಭಾವ ಮೆರೆದು ಸಂತಸ ಪಟ್ಟರು. ತಾಯ್ನಾಡಿನ ದಸರಾ ಸಂಭ್ರಮವನ್ನು ನೆನೆದು ಅದರ ಹುರುಪನ್ನು ಹಂಚಿಕೊಂಡರು; ಮಕ್ಕಳಿಂದ ಹಿಡಿದು ವಯಸ್ಕರವರಗೆ ವಿವಿಧ ಆಟೋಟ ಸ್ಪರ್ಧೆಗಳು , ರಂಗೋಲಿ ಸ್ಪರ್ಧೆಗಳು ವಿಶೇಷ ಮೆರುಗನ್ನು ನೀಡಿದವು. ಮೊದಲನೇ ಕಾರ್ಯಕ್ರಮವು ಭರ್ಜರಿ ಯಶಸ್ವಿಯಾಗಿ ಕನ್ನಡ ಮನಸುಗಳನ್ನು ಒಂದೆಡೆ ಸೇರಿಸಿದವು.

ಹಿಸ್ ಹೈನೆಸ್ಸ್ ಶೇಖ್ ಹಂದಾನ್ ದುಬೈ ರಾಜಕುಮಾರ ಆಯೋಜಿಸಿದ ದುಬೈ ಫಿಟ್ನೆಸ್ ಚಾಲೆಂಜ್ ಅರೋಗ್ಯ ತಿಂಗಳನ್ನು ಪ್ರೋತ್ಸಾಹಿಸಲು ಹೆಮ್ಮೆಯ ಯುಎಇ ಕನ್ನಡಿಗರು 'ಫನ್ ವಾಕ್ ಕಾರ್ಯಕ್ರಮ ಹಮ್ಮಿಕೊಂಡೆವು. ದುಬೈನ ಝಬೀಲ್ ಪಾರ್ಕಿನಲ್ಲಿ ಎಲ್ಲರೂ ಸೇರಿ 5 ಕಿಲೋಮೀಟರ್ ನಡಿಗೆಯಲ್ಲಿ 150 ಮಂದಿ ಸಂತಸದಿಂದ ಮುಂಜಾನೆ 7 ಘಂಟೆಗೆ ಸೇರಿ ಭಾಗವಹಿಸಿ ಅರೋಗ್ಯ ಮತ್ತು ವ್ಯಾಯಾಮ ಪ್ರಾಮುಖ್ಯತೆಯ ಬಗ್ಗೆ ವಿಚಾರ ವಿನಿಮಯ ಮಾಡಿಕೊಂಡರು. ಎಲ್ಲ ವಯೋಮಾನದವರು ಖುಷಿಯಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಈ ಕಾರ್ಯಕ್ರಮದಿಂದ ಸ್ಪೂರ್ತಿಗೊಂಡ ತಂಡ ಕನ್ನಡ ಮಕ್ಕಳಿಗಾಗಿ ಗಣರಾಜ್ಯೋತ್ಸವ, ಸಂಕ್ರಾಂತಿ, ಕ್ರಿಸ್ಮಸ್ ' ಕನ್ನಡ ಮಕ್ಕಳ ಪ್ರತಿಭಾ ಸ್ಪರ್ಧೆ ' ಏರ್ಪಡಿಸಿತು.. ಇರಾನಿ ಕ್ಲಬ್ ಆಡಿಟೋರಿಯಂನಲ್ಲಿ ನಡೆದ ಈ ಸುಂದರ ಕಾರ್ಯಕರ್ಮದಲ್ಲಿ ಕನ್ನಡದ ನೂರಕ್ಕೂ ಹೆಚ್ಚು ಮಕ್ಕಳು ತಮ್ಮ ಪ್ರತಿಭಾ ಪ್ರದರ್ಶನ ಮಾಡಿ ಪ್ರೇಕ್ಷಕರ ಮನಗೆದ್ದರು, ಬಹುಮಾನ ಗಳಿಸಿ ಹೊಸ ಆತ್ಮವಿಶ್ವಾಸದೊಂದಿಗೆ ಕುಣಿದು ಕುಪ್ಪಳಿಸಿದರು.

ಕನ್ನಡಿಗರಿಂದ ಕನ್ನಡಿಗರಲ್ಲೇ ವ್ಯವಹಾರ ಎಂಬ ಶೀರ್ಷಿಕೆಯೊಂದಿಗೆ ಯುಎಇ ಕನ್ನಡಿಗಸ್ ಬಿಸಿನೆಸ್ ಫೋರಮ್ ಗುಂಪು ಪ್ರಾರಂಭಿಸಲಾಯಿತು. ಈ ದೇಶದಲ್ಲಿರುವ ಎಲ್ಲ ಕನ್ನಡ ಉದ್ಯಮಿಗಳು ಪರಸ್ಪರ ವ್ಯವಹಾರ ನಡೆಸಿದರೆ ಅದು ವೇಗವಾಗಿಯೂ, ಕನ್ನಡಿಗರಿಗೆ ಅನುಕೂಲಕರ, ಲಾಭದಾಯ್ಕವಾಗಿಯೂ ಪರಿಣಮಿಸುತದೆ, ಈ ನಿಟ್ಟಿನಲ್ಲಿ ಅದು ದಿನದಿಂದ ದಿನಕ್ಕೆ ಶಕ್ತಿಯುತವಾಗಿ ಬೆಳೆಯುತ್ತಲಿದೆ. ಕನ್ನಡ ಉದ್ಯಮಿಗಳ ಸರಕು ಮತ್ತು ಸೇವೆ ಪರಸ್ಪರ ವ್ಯವಹಾರ ವೃದ್ಧಿಸುತ್ತಿದೆ. ಉದ್ಯಮಿಗಳು ಕನ್ನಡಿಗರಿಗೆ ಉದ್ಯೋಗಾವಕಾಶ ಕಲ್ಪಿಸುತ್ತಿದ್ಧಾರೆ.

ಈ ದೇಶಕ್ಕೆ ಕೆಲಸ ಹುಡುಕಿ ಬರುವ ಕನ್ನಡಿಗ ಉದ್ಯೋಗಾರ್ಥಿಗಳಿಗೆ 'ಜಾಬ್ ಸೀಕರ್ಸ್' ಗ್ರೂಪ್ ಸಹ ತೆರೆಯಲಾಗಿದೆ. ಪ್ರಸ್ತುತ ಇಲ್ಲೇ ಉದ್ಯೋಗದಲ್ಲಿರುವ , ಬದಲಾವಣೆ ಬಯಸುತ್ತಿರುವ ಕನ್ನಡಿಗರಿಗೆ ವೇದಿಕೆ ಕಲ್ಪಿಸಿದೆ. ಈ ನಿಟ್ಟಿನಲ್ಲಿ ಇತ್ತೇಚೆಗೆ ಜಾಬ್ ಇಂಟರ್ವ್ಯೂ ಟಿಪ್ಸ್ ಮತ್ತು ಜಾಬ್ ಫೇರ್ ಸೆಶನ್ ನಡೆಸಲಾಯಿತು. ಸುಮಾರು 100 ಕ್ಕೂ ಮೀರಿ ಕೆಲಸ ಹುಡುಕುತ್ತಿರುವ ಕನ್ನಡಿಗರು ಇದರಲ್ಲಿ ಪಾಲ್ಗೊಂಡು ರಿಕ್ಯೂರಿಟರ್ಸ್ಗಳನ್ನ ಭೇಟಿ ಮಾಡಿ ಮಾಹಿತಿ ಪಡೆದರು . ಈ ಶಿಬಿರದ ನಂತರ ಇದುವರೆಗೆ ಸುಮಾರು 45 ಕನ್ನಡಿಗರಿಗೆ ಉದ್ಯೋಗ ದೊರಕಿದೆ ಮತ್ತು ಉದ್ಯೋಗ ಮಾಹಿತಿ ಕನ್ನಡಿಗರಲ್ಲಿ ಪಾದರಸದಂತೆ ವೇಗವಾಗಿ ಹರಿಯುತ್ತಿದೆ.

ಸಾಮಾಜಿಕ ಕಳಕಳಿಯಿರುವ ಈ ಗುಂಪು ಕನ್ನಡಿಗರಿಗೆ ಸಂಕಷ್ಟ ಬಂದಾಗ ಸ್ಪಂದಿಸುತ್ಹಿದೆ. ದುಬೈನಲ್ಲಿ ಅಪಘಾತದಲ್ಲಿ ಮರಣ ಹೊಂದಿದ ಶ್ರೀ.ಜೋಸೆಫ್ ಡಿಸೋಜಾ ಮತ್ತು ಅಕಾಲ ಮೃತ್ಯ ಹೊಂದಿದ ಯುವಕ ಶ್ರೀ.ಮಂಜುನಾಥ್ ಕುಟುಂಬಕ್ಕೆ ಸದಸ್ಯರಿಂದ ಸಹಾಯ ಬೇಡಿ ಅವರ ಕುಟುಂಬಕ್ಕೆ ಧನಸಹಾಯ, ಶಾರ್ಜಾದ ಆಸ್ಪತ್ರೆಯಲ್ಲಿ ತೀವ್ರ ಖಾಯಿಲೆಯಿಂದ ಬಳಲುತ್ತಿದ್ದ ನಾಗರಾಜ್ ಅವರಿಗೆ ಸಹಾಯ, ಕೊಡಗು ಉತ್ತರ ಕರ್ನಾಟಕ ಪ್ರವಾಹ ಪರಿಹಾರ ನಿದಿಗೆ ದೇಣಿಗೆ ಸಂಗ್ರಹಿಸಿದ್ದು ಅದನ್ನು ಸಂತ್ರಸ್ತರಿಗೆ ಶೀಘ್ರದಲ್ಲೇ ತಲುಪಿಸಲಾಗುವುದು . ಕನ್ನಡದ ಯುವತಿಯೋರ್ವಳು ವೀಸಾ ವಂಚನೆಗೊಳಗಾಗಿ ಸಮಾಜಘಾತುಕರ ಕೈಸೆರೆಯಾಗುವ ವಿಷಯ ತಿಳಿದ ಸದಸ್ಯರು ಕೂಡಲೇ ಅವಳ ನೆರವಿಗೆ ಧಾವಿಸಿ ಸುರಕ್ಷಿತವಾಗಿ ಕಾಪಾಡಿ ಆಕೆಯನ್ನು ಸ್ವದೇಶಕ್ಕೆ ಮರಳುವ ವ್ಯವಸ್ಥೆ ಮಾಡಿಕೊಟ್ಟಿತು . ಇಂತಹ ಅನೇಕ ದಿನನಿತ್ಯ ಉದಾಹರಣೆಗಳು ಈ ಗುಂಪಿನ ವೈಶಿಷ್ಟ್ಯ .

ಅಬುಧಾಬಿಯಲ್ಲಿ ನಡೆದ ವಿಶ್ವ ವಿಶೇಷ ಒಲಿಂಪಿಕ್ಸ್ ಕ್ರೀಡೆಯಲ್ಲಿ ಭಾರತದ ಕ್ರೀಡಾಪಟುಗಳು 364 ಪದಕ ಗಳಿಸಿದರು, 85 ಚಿನ್ನ, 154 ಬೆಳ್ಳಿ, 129 ಕಂಚಿನ ಪದಕಗಳಿಸಿದ ಕರ್ನಾಟಕದ ಆಟಗಾರರು ಮತ್ತು ತಂಡದ ಸಹ ತರಬೇತುದಾರರು ಕನ್ನಡತಿ ಶ್ರೀಮತಿ.ಆರತಿ ಅಚುದ ಕಾರ್ಯ ನಿರ್ವಹಿಸಿದ್ದರು. ಹೆಮ್ಮೆಯ ಯುಎಇ ಕನ್ನಡಿಗರ ತಂಡ ಈ ಹೆಮ್ಮೆಯ ಕನ್ನಡತಿಯನ್ನು ಮತ್ತು ಭಾಗವಹಿಸಿದ ಮಕ್ಕಳನ್ನು ಭೇಟಿ ಮಾಡಿ ಸನ್ಮಾನಿಸಿ, ಗೌರವ ಸಲ್ಲಿಸಿತು.

ರಮಾದಾನ್ ತಿಂಗಳ ಶುಭ ಸಂದರ್ಭದಲ್ಲಿ ಸರ್ವಧರ್ಮ ಕೂಟ ಮತ್ತು ಇಫ್ತಾರ್ ಭೋಜನ ಸಂಜೆ ನಡೆಯಿತು . ಎಲ್ಲ ಧರ್ಮದ ಕನ್ನಡಿಗರು ಇದರಲ್ಲಿ ಪಾಲ್ಗೊಂಡು ಸಹಿಷ್ಣುತಾ ವರ್ಷ 2019 ರ ಮೇಲ್ಮೆಯನ್ನು ಮೆರೆದರು . ಎಲ್ಲ ಧರ್ಮಗಳ ಸಾರ ಒಂದೇ ಎಂಬ ಸಂದೇಶವನ್ನು ಈ ಮೂಲಕ ಪ್ರೀತಿಯಿಂದ ಹಂಚಿಕೊಂಡರು.

ಹೆಮ್ಮೆಯ ಯುಎಇ ಕನ್ನಡಿಗರಿಂದ ಸ್ಪೂರ್ತಿಗೊಂಡು ಹೆಮ್ಮೆಯ ಯುಎಇ ಕನ್ನಡಿಗರು - ರಾಕ್ ಪ್ರಾಂಭವಾಯಿತ್ತೆಂದು ಹೇಳಲು ಅತ್ಯಂತ ಹರ್ಷವಾಗುತ್ತಿದೆ. ರಾಸ್ ಅಲ್ ಖೈಮಾ ಕನ್ನಡಿಗರು 'ರಾಕ್ ಕನ್ನಡ ಸಂಘ' ಆರಂಭಿಸಿದ್ದು , ಕನ್ನಡದ ಮತ್ತೊಂದು ಉಜ್ವಲ ದೀಪ ಹತ್ತಿದೆ .ಕನ್ನಡ ಗೃಹ ಪಾಠಶಾಲೆ ಮೂಲಕ ಕನ್ನಡ ಮಕ್ಕಳ ಕನ್ನಡ ಭಾಷಾ ವಿದ್ಯೆ,ಪ್ರೇಮ, ವೇಗವಾಗಿ ಬೆಳೆಯುತ್ತಿದೆ, ಕನ್ನಡಿಗರ ಪರಸ್ಪರ ಪರಿಚಯ ,ಸಂಪರ್ಕ ಹೊಸ ಚೈತನ್ಯ ಮತ್ತು ಶಕ್ತಿ ತರುತ್ತಿದೆ. ಹಾಗೇ ಕನ್ನಡ ಮಣ್ಣಿನಿಂದ ಅರಬರ ಈ ನಾಡಿಗೆ ಬಂದು ಸೇವೆ ಸಲ್ಲಿಸುತ್ತಿರುವ ಕನ್ನಡ ವೈದ್ಯರುಗಳ ಒಂದು ಒಕ್ಕೂಟವನ್ನು ನಾವು ರಚಿಸಿದ್ದು ಎಲ್ಲಾ ಕನ್ನಡಕ್ಕಾಗಿ ಮಾಡುವ ನಮ್ಮ ಅಳಿಲು ಸೇವೆಗೆ ನಿಮ್ಮೆಲ್ಲರ ಸಹಾಯ ಸಹಕಾರ ಸದಾ ಹೀಗೆ ಇರಲಿ ಎಂದು ಈ ಮೂಲಕ ಕೇಳಿಕೊಳ್ಳುತ್ತಿದ್ದೇವೆ.

ಹೆಮ್ಮೆಯ ಯುಎಇ ಕನ್ನಡಿಗ ಗುಂಪು ೭ ಎಮಿರೇಟ್ನ್ಲಲಿ ನಡೆಯುವ ಯಾವುದೇ ಕನ್ನಡ ಕಾರ್ಯಕ್ರಮಗಳನ್ನು ಗುಂಪಿನಲ್ಲಿ ಹಾಕಿ ಸದಸ್ಯರನ್ನು ಭಾಗವಹಿಸಲು ಪ್ರೋತ್ಸಾಹಿಸುತ್ತದೆ . ಕನ್ನಡಿಗ ಏಳ್ಗೆ, ಕನ್ನಡಿಗ ಭಾಷೆಯ ಬೆಳವಣಿಗೆ, ಕನ್ನಡ ಸಂಸ್ಕೃತಿಯ ಉಳಿವೆ ಇದರ ಮೂಲ ಉದ್ದೇಶ .

Copyrights © 2019 Dubai Kannadigaru
uaekannadigaru@gmail.com · +971 0567012123 +971 0581872686